<

ಕರ್ನಾಟಕ ರಾಜ್ಯ, ತುಮಕೂರು ಜಿಲ್ಲೆ, ಗುಬ್ಬಿಯ ಶ್ರೀ ಕರಿಗಿರಪ್ಪನವರ ವಂಶಸ್ಥರು ಕಾಲಕ್ರಮದಲ್ಲಿ ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ವಾಸವಾಗಿರುತ್ತಾರೆ. ಇವರು ಉಲುಚುಕಮ್ಮೆ ಪಂಗಡಕ್ಕೆ ಸೇರಿದವರಾಗಿದ್ದು ರಥೀತರಸಗೋತ್ರದವರಾಗಿರುತ್ತಾರೆ ಹಾಗೂ ಮನೆದೇವರಾದ ದೇವರಾಯನದುರ್ಗದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯನ್ನು ಪೂಜಿಸುತ್ತಾರೆ.

ಈ ವಂಶಸ್ಥರನ್ನು ಒಟ್ಟುಗೂಡಿಸುವುದು ನಮ್ಮ ಗುರಿ.

Over time, the descendants of Sri Karigirappa from Gubbi (Tumkur district, Karnataka, INDIA) have settled across the world. This family belongs to the Uluchukamme Brahmin sect (Rathitarasa Gotra) and the family deity is Sri Lakshmi Narasimha Swamy at Devarayanadurga.

Our aim is to bring this family together again.

ನಮ್ಮ ಬಗ್ಗೆ

ಗುಬ್ಬಿಯಲ್ಲೆ ನೆಲೆ ನಿಂತ ಕರಿಗಿರಪ್ಪನವರ ವಂಶ ಈಗ ಸುಮಾರು ಏಳು ತಲೆಮಾರುಗಳ ವಂಶಾಭಿವೃದ್ಧಿಯನ್ನು ಕಂಡಿದೆ. ಈ ವಂಶಸ್ಥರೆಲ್ಲ ಇತರ ವಂಶದವರಂತೆಯೇ ಅನೇಕ ಕಷ್ಟ ಸುಖಗಳನ್ನು ಕಂಡ ವಂಶವಾಗಿದೆ. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಹಬ್ಬಿದ ಇನ್ಫ್ಲುಎಂಜ಼ ಜ್ವರದಿಂದ ನಮ್ಮ ವಂಶದವರಲ್ಲಿಯೂ ಅನೇಕರು ಅಕಾಲ ಮರಣವನ್ನು ಹೊಂದಿದರು. ಅದು ನಮ್ಮ ವಂಶದವರಲ್ಲಿ ಅನೇಕರಿಗೆ ಬಹಳ ಕಷ್ಟಕರ ಸನ್ನಿವೇಶಗಳನ್ನು ತಂದೊಡ್ಡಿತು. ಆದರೆ ಕರಿಗಿರಪ್ಪನವರ ವಂಶಸ್ಥರು ಎಲ್ಲ ಕಷ್ಟಗಳನ್ನು ಎದುರಿಸಿ ನಿಂತು ಜೀವನದಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ ಎನ್ನುವುದು ಬಹಳ ಸಂತೋಷದ ವಿಷಯ. ಅನೇಕರು ಸಮಾಜದ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿರುವ ಉದಾಹರಣೆಗಳಿವೆ. ಸಮಾಜಸೇವೆಗೆ ತೊಡಗಿಕೊಂಡಿರುವವವರು ಅನೇಕರಿದ್ದಾರೆ. ವಿವಿಧ ಬಗೆಯ ಪ್ರತಿಭೆಗಳು ನಮ್ಮ ವಂಶದವರಲ್ಲಿ ಕಂಡು ಬರುತ್ತದೆ.

ಆದರೆ ನಮ್ಮಲ್ಲಿ ಅನೇಕರಿಗೆ ಪರಸ್ಪರ ಪರಿಚಯವಿಲ್ಲ. ನಮ್ಮವರು ಎಂದು ತಿಳಿದಿಲ್ಲ. ವಂಶಸ್ಥರೆಲ್ಲರು ನಿಧಾನಕ್ಕೆ ದೂರ ಸರಿಯುತ್ತಿದ್ದಾರೆಯೋ ಎನ್ನುವ ಅನುಭವವಾಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಒಗ್ಗೂಡಿ ಹೇಗೆ ಈ ಬಾಂಧವ್ಯವನ್ನು ಉಳಿಸಬೇಕು ಹಾಗೂ ಬೆಳಸಬೇಕು ಎಂಬ ಬಗ್ಗೆ ಚಿಂತನೆ / ಚರ್ಚೆ ನಡೆಸಬೇಕಾಗಿದೆ.

ಈ ಸಂಬಂಧ, ಮೂರು ವರ್ಷಕ್ಕೆ ಒಮ್ಮೆ ಈ ವಂಶದ ಸದಸ್ಯರೆಲ್ಲರು ದೇವರಾಯನದುರ್ಗದಲ್ಲಿ ಸೇರುತ್ತಾರೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ತಪ್ಪದೆ ಭಾಗವಹಿಸಬೇಕಾಗಿ ಕೋರಿಕೆ.

ಸದ್ಯದಲ್ಲೇ ನಡೆಯಲಿರುವ ಕಾರ್ಯಕ್ರಮಗಳು

ಗುಬ್ಬಿಯ ಕರಿಗಿರಪ್ಪನವರ ವಂಶಸ್ಥರ ಸಮಾವೇಶ - 3 ಭಾನುವಾರ SUNDAY
16 October 2022
ಬೆಳಿಗ್ಗೆ 8.30: ವಂಶದವರೆಲ್ಲ ಈ ವೇಳೆಗೆ ದೇವರಾಯನದುರ್ಗವನ್ನು ತಲುಪಬೇಕು.
ಬೆಳಿಗ್ಗೆ 9 - 11: ದೇವಸ್ಥಾನದಲ್ಲಿ ಅಭಿಷೇಕ ಮತ್ತು ಉತ್ಸವ
ಸಂಜೆ 5.00 ವರೆಗೆ: ವಂಶಸ್ಥರ ಸಮಾವೇಶ, ಪರಸ್ಪರ ಪರಿಚಯ, ವಿಚಾರ ವಿನಿಮಯ, ಕಿರಿಯರಿಗೆ ಮತ್ತು ಹಿರಿಯರಿಗೆ ವಿವಿಧ ಆಟಗಳು ಇತ್ಯಾದಿ

ಹಿಂದೆ ನಡೆದಿರುವ ಕಾರ್ಯಕ್ರಮಗಳು

ಭಾನುವಾರ
28 July 2019
ಗುಬ್ಬಿಯ ಕರಿಗಿರಪ್ಪನವರ ವಂಶಸ್ಥರ ಸಮಾವೇಶ - 2
ಭಾನುವಾರ ಮತ್ತು ಸೋಮವಾರ
22 & 23 May 2016
ಗುಬ್ಬಿಯ ಕರಿಗಿರಪ್ಪನವರ ವಂಶಸ್ಥರ ಸಮಾವೇಶ - 1

ಸಂಪರ್ಕ

ನೀವು ಈ ವಂಶದ ಸದಸ್ಯರಾಗಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ. If you are a member of this family get in touch with us:

ಈ-ಮೇಲ್/E-mail: karigiri@kirankn.com